Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ಉತ್ಪನ್ನಗಳು

ಕರ್ನಾಟಕದ ಹಿರಿಮೆ - ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು

ಕರ್ನಾಟಕದಲ್ಲಿ ಹೈನುಗಾರಿಕೆಯು ಒಂದು ಬೃಹತ್ ಉದ್ಯಮವಾಗಿ ಬೆಳೆದಿದ್ದು ಇದರಿಂದ ಲಕಾóಂತರ ಉತ್ಪಾದಕರು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಹಾಲು ಒಂದು ಸಂಪೂರ್ಣ ಸಮತೋಲನ ಆಹಾರವಾಗಿದ್ದು ಇದರಲ್ಲಿ ಕೊಬ್ಬು, ಪ್ರೋಟೀನ್,ಸಕ್ಕರೆ ಅಂಶ,ವಿವಿದ ಖನಿಜಾಂಶಗಳು ಹಾಗೂ ಹಲವಾರು ವಿಟಮಿನ್, ಎನೆಝೈಮ್ ಗಳಿದ್ದು ಇದರಿಂದ ಮಾನವ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಹಾಲಿನಲ್ಲಿದ್ದು, ಪ್ರತಿದಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿರುತ್ತದೆ.

ಹಾಲನ್ನು ಕರೆದ ನಂತರ ಸಂಸ್ಕರಿಸದೆ ಇದ್ದಲ್ಲಿ ಇದರಲ್ಲಿರುವ ಲಕಾóಂತರ ಬ್ಯಾಕ್ಟೀರಿಯಗಳು ಹಾಲಿನ ಗುಣಮಟ್ಟವನ್ನು ಕಡಿಮೆ ಮಾಡಿ ಹಾಲು ಹುಳಿ ಬರುವುದನ್ನು ತಡೆಗಟ್ಟಲು ಎಲ್ಲಾ ಡೈರಿಗಳಲ್ಲಿ ಹಾಲನ್ನು ಸಂಸ್ಕರಿಸಿ ಪಾಶ್ಚರೀಕರಣಗೊಳಿಸುತ್ತಿದ್ದು ಇದರಿಂದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿರುತ್ತದೆ.

ಪ್ರಪಂಚದಾದ್ಯಂತ ಹಾಲಿನಿಂದ ಸುಮಾರು 5000 ಬಗೆಯ ವಿವಿದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು , ಇಷ್ಟು ವಿವಿದ ಉತ್ಪನ್ನಗಳನ್ನು ಬೇರೆ ಯಾವುದೇ ಪದಾರ್ಥದಿಂದ ತಯಾರಿಸಲು ಸಾದ್ಯವಿಲ್ಲ.

ಪ್ರಸ್ತುತ ಮೈಸೂರು ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 5,00,000 ಲೀ ಹಾಲನ್ನು ಸಂಗ್ರಹಿಸುತ್ತಿದ್ದು ಇದರಲ್ಲಿ 2,25,000 ಲೀ ಹಾಲನ್ನು ಪ್ಯಾಕೆಟ್ ರೂಪದಲ್ಲಿ ಹಾಗೂ 45,000 ಲೀ ಮೊಸರನ್ನು ಮಾರಾಟಮಾಡಲಾಗುತ್ತಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿದ ಕೊಬ್ಬು/ಜಿಡ್ಡೇತರ ಘನಾಂಶಗಳ ಹಾಲನ್ನು ತಯಾರಿಸಲಾಗುತ್ತಿದ್ದು , ಟೋನ್ಡ್ ಹಾಲು, ಹೋಮೋಜಿನೈಸ್ಡ್ ಹಾಲು , ಹೋಮೋಜಿನೈಸ್ಡ್ ಹಸುವಿನ ಹಾಲು, ಶುಭಂ ಹಾಲು ಮತ್ತು ನಂದಿನ ವಿಷೇಶ ಹಾಲನ್ನು ಸಂಸ್ಕರಿಸಿ ಪ್ಯಾಕ್ ಮಾಡಲಾಗುತ್ತಿದ್ದು ಗುಣಮಟ್ಟ/ಉಪಯುಕ್ತತೆಯು ಕೆಳಕಂಡಂತಿದೆ.

ಮೈಸೂರು ಡೈರಿಯಲ್ಲಿ ಕೆಳಕಂಡ ಉತ್ಪನ್ನಗಳನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ಶುಭ್ರ ಪರಿಸರದಲ್ಲಿ ತಯಾರಿಸಲಾಗುತ್ತಿದ್ದು ಎಲ್ಲಾ ಉತ್ಪನ್ನಗಳಲ್ಲಿ ನಿಗಧಿತ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳಲಾಗಿದೆ.