Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ಒಕ್ಕೂಟದ ಬಗ್ಗೆ

ಕರ್ನಾಟಕ ಸರ್ಕಾರದ ಪಶು ಸಂಗೋಪನಾ ಇಲಾಖೆಯ ಅಧೀನದಲ್ಲಿ ದಿನವಹಿ 10 ಸಾವಿರ ಲೀಟರ್ ಹಾಲು ಸಂಸ್ಕರಣಾ ಸಾಮಥ್ರ್ಯದ ಸರ್ಕಾರಿ ಡೇರಿಯು 1965 ರಲ್ಲಿ ಸ್ಥಾಪಿತವಾಗಿದ್ದು, ಇದನ್ನು 1974 ರಲ್ಲಿ ಪ್ರಾರಂಭಿಸಲ್ಪಟ್ಟ ಕರ್ನಾಟಕ ಹೈನು ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲಾಯಿತು.  ಇದನ್ನು 1980 ರಲ್ಲಿ ದಿನವಹಿ 60,000 ಲೀ. ಸಾಮಥ್ರ್ಯಕ್ಕೆ ಕ್ಷೀರಧಾರೆ  ಯೋಜನೆಯಡಿ ವಿಸ್ತರಿಸಿ, 1984 ರಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿಗೆ ಹಾಗು 1.6.1987 ರಿಂದ ಒಕ್ಕೂಟಕ್ಕೆ ವಹಿಸಿಕೊಡಲಾಗಿರುತ್ತದೆ. ಪ್ರಸ್ತುತ ದಿನವಹಿ 6.0 ಲಕ್ಷ ಲೀಟರ್ ಸಂಸ್ಕರಣಾ ಸಾಮಥ್ರ್ಯ ಹೊಂದಿರುತ್ತದೆ.