Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ತಾಂತ್ರಿಕ ಸೌಲಬ್ಯಗಳು

ರಾಸುಗಳ ಹಾರೈಕೆಗೆ ಸಂಬಂಧಪಟ್ಟಂತೆ ವೈದ್ಯಾಧಿಕಾರಿಗಳ ಸೇವೆ ಕೊಡುವಂತಹದ್ದು, ಕೃತಕ ಗರ್ಭಧಾರಣೆ ಸೇವೆ ಕೊಡುವಂತಹದ್ದು, ತಳಿ ಸಂವರ್ಧನೆ ಕಾರ್ಯಕ್ರಮಗಳನ್ನು ಕೊಡುವಂತಹ ಕೆಲಸವನ್ನು  ಮೈಸೂರು ಜಿಲ್ಲಾ ಹಾಲು ಒಕ್ಕೂಟವು ಮಾಡುತ್ತಿರುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಹಾಲು ಉತ್ಪಾದನೆ ಮಾಡುವುದಕ್ಕೆ ಬೇಕಾಗುವ ಮೇವಿನ ಬೆಳೆ,ಮೇವಿನ ತಾಕುಗಳನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ರಾಸುಗಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು ಕಾರ್ಯಕ್ರಮಗಳನ್ನು ಅದರಲ್ಲೂ ಮುಖ್ಯವಾಗಿ ಕಾಲುಬಾಯಿ ಜ್ವರಕ್ಕೆ ಸಂಬಂಧಪಟ್ಟ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ರಾಸುಗಳಿಗೆ ಬೇಕಾಗಿರುವ ಪಶು ಆಹಾರವನ್ನು ಕ.ಹಾ.ಮ. ಪಶು ಆಹಾರ ಘಟಕದಿಂದ ಹಾಲು ಉತ್ಪಾದಕರಿಗೆ ಪೂರೈಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ಪಶುವೈದ್ಯಕೀಯ ಸೇವೆ

ಹಾಲು ಉತ್ಪಾದಕರ ರಾಸುಗಳಿಗೆ  ತುರ್ತುಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದೆ. ಹಾಲು ಉತ್ಪಾದಕರ ಮನೆ ಬಾಗಿಲಿಗೆ ತುರ್ತುಚಿಕಿತ್ಸಾ ಸೌಲಭ್ಯವನ್ನು ವದಗಿಸಲಾಗುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯವನ್ನು  ಕಲ್ಪಿಸಿದ್ದು, ರಾಸುಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಂಜೆತನ ನಿವಾರಣಾ ಶಿಬಿರಗಳನ್ನು ಏರ್ಪಡಿಸಿ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಕ್ಕೂಟದ ಅಧೀನದಲ್ಲಿರುವ ಪಶುರೋಗ ನಿರ್ಣಯ ಕೇಂದ್ರದಲ್ಲಿ ರಾಸುಗಳ ರಕ್ತ, ಮಲ, ಮೂತ್ರ ಮುಂತಾದುವುಗಳ ವಿಶ್ಲೇಷಣೆ ಮಾಡುವ ಸೌಲಭ್ಯಗಳಿದ್ದು ಅªಶ್ಯಕ ಮಾದರಿಗಳನ್ನು ಸಂಘಗಳ ಸದಸ್ಯರಿಗೆ ಉಚಿತವಾಗಿ ಪರೀಕ್ಷಿಸಲಾಗುತ್ತಿದೆ. ಕಾಲು ಬಾಯಿ ಜ್ವರದ ಚುಚ್ಚುಮದ್ದು ಅಳವಡಿಕೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ.

ರಾಸುಗಳಲ್ಲಿ ಹಾಲು ಉತ್ಪಾದನೆÉ ಹೆಚ್ಚಿಸಲು ಮತ್ತು ರಾಸುಗಳ ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಸಂಘಗಳಲ್ಲಿ ಜಂತುಹುಳು ನಿವಾರಣಾ ಔಷಧಿ ವಿತರಿಸುವ ಕಾಂiÀರ್iವನ್ನು ಏರ್ಪಡಿಸಲಾಗಿದೆ.

ಕೃತಕ ಗರ್ಭಧಾರಣೆ ಸೇವೆ

ಒಕ್ಕೂಟದ ವ್ಯಾಪ್ತಿಯಲ್ಲಿನ ರಾಸುಗಳ ಹಾಲು ಉತ್ಪಾದನಾ ಸಾಮಥ್ರ್ಯವನ್ನು ತಳಿ ಅಭಿವೃದ್ದಿ ಮೂಲಕ ಉತ್ತಮ ಪಡಿಸುವುದಕ್ಕಾಗಿ ಕೃತಕ ಗರ್ಭಧಾರಣಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಏಕ ಕೃತಕ ಗರ್ಭಧಾರಣಾ ಕೇಂದ್ರಗಳು ಮತ್ತು ಸಮೂಹ ಕೃತಕ ಗರ್ಭಧಾರಣಾ ಕೇಂದ್ರಗ ಮೂಲಕ ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತಿದೆ.

ಮೇವು ಮತ್ತು ಪಶು ಆಹಾರ

ಅಧಿಕ ಹಾಲು ಉತ್ಪಾದನೆಗೆ ಉತ್ತಮ ಗುಣಮಟ್ಟದ ಹಸಿರು ಮೇವು ಮತ್ತು ಸಮತೋಲನಾ ಪಶು ಆಹಾರ ಪ್ರಮುಖವಾದುದ್ದು. ವಿಶೇಷವಾಗಿ ಹಸಿರು ಮೇವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ಹಾಲು ಉತ್ಪಾದನಾ ವೆಚ್ಚ ಕಡಿಮೆಯಾಗಿ ಹೈನುಗಾರಿಕೆÉ ಲಾಭದಾಯಕವಾಗುವುದರಿಂದ ಒಕ್ಕೂಟವು ವಿವಿಧ ಹಸಿರು ಮೇವಿನ ತಳಿಗಳ ಪ್ರಾತ್ಯಕ್ಷತೆ ಹಾಗೂ ಬೀಜೋತ್ಪಾದನೆಯನ್ನು ಕೈಗೊಂಡು ರೈತರಿಗೆ ರಿಯಾಯಿತಿ ದರದಲ್ಲಿ ಸೂಕ್ತ ತಾಂತ್ರಿಕ ಸಲಹೆಯೊಂದಿಗೆ ಸಂಘಗಳ ಮುಖೇನ ಸರಬರಾಜು ಮಾಡಲಾಗುತ್ತಿದೆ.

ಒಕ್ಕೂಟದ ವ್ಯಾಪ್ತಿಯ ಹಾ.ಉ.ಸ ಸಂಘಗಳಿಗೆ ರಿಯಾಯಿ ದರದಲ್ಲಿ ಪಶು ಆಹಾರ, ಖನಿಜ ಮಿಶ್ರಣ, ಯೂರಿಯಾ ಕಾಕಂಬಿ ಬಿಲ್ಲೆ ಸರಬರಾಜು ಮಾಡಲಾಗುತ್ತಿದೆ. ವಿವಿಧ ಮೇವಿನ ಬೆಳೆಗಳ ವಿತರಣೆ, ರಸಮೇವು, ಒಣಮೇವಿನ ಪೌಷ್ಠೀಕರಣ, ಮೇವು ತುಂಡರಿಸುವ ಯಂತ್ರದ ವಿತರu,Éಅಜೋಲ ಬೆಳೆ ಇತರೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಸ್ಟೆಪ್ ಯೋಜನೆ

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಾಯೋಜಿತ ‘ಸ್ಟೆಪ್’ ಯೋಜನೆ.ಮಹಿಳೆಯರಿಗಾಗಿ ವೃತ್ತಿ ತರಬೇತಿ ಮತ್ತು ಉದ್ಯೋಗ ಬೆಂಬಲಿತ ಯೋಜನೆ.ಅಸಂಘಟಿತ ವಲಯದಲ್ಲಿರುವ ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ದಿಪಡಿಸುವುದು. ಯೋಜನೆಯ ಮುಖ್ಯ ಉದೇಶವಾಗಿರುತ್ತದೆ.ಅಲ್ಲದೇ ಮಹಿಳೆಯರಲ್ಲಿ ವೃತ್ತಿಕೌಶಲ್ಯತೆ ಅಭಿವೃದ್ದಿಪಡಿಸುವ ತರಬೇತಿಗಳನ್ನು ಹಾಗು ನಿರಂತರ ಆದಾಯ ತರುವಂತಹ ಉದ್ಯೋಗಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಇತರೆ ಚಟುವಟಿಕೆಗಳು

ಸಂಘಗಳ ಸಿಬ್ಬಂದಿ, ಅದ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರುಗಳಿಗೆ ಸಂಘಗಳ ನಿರ್ವಾಹಣೆ ಬಗ್ಗೆ, ಹಾಲು ಉತ್ಪಾದಕರಿಗೆ ಹೈನು ರಾಸುಗಳ ನಿರ್ವಾಹಣೆ ಬಗ್ಗೆ, ಸಂಘಗಳ ಕಾರ್ಯದರ್ಶಿಗಳಿಗೆ, ಪರೀಕ್ಷಕರುಗಳಿಗೆ, ಕೃ.ಗ. ಕಾರ್ಯಕರ್ತರಿಗೆ, ಪ್ರಥಮ ಚಿಕಿತ್ಸಾ ಕಾರ್ಯಕರ್ತರಿಗೆ,  ಹಾಗೂ ಬಿ.ಎಂ.ಸಿ. ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ಮಾಡಲಾಗುತ್ತಿದೆ.

ಸರ್ಕಾರದ ಯೋಜನೆಗಳಾದ ಯಶಸ್ವಿನಿ,ಅಮೃತ ಯೋಜನೆ ಹಾಗು ಸರ್ಕಾರದ 5/- ರೂ ಪ್ರೋತ್ಸಾಹ ಧನ ಯೋಜನೆ ಯನ್ನು ಯಶಸ್ವಿಯಾಗಿ ಅನುಷ್ಠಾನಗೂಳಿಸಲಾಗುತ್ತಿದೆ.

ಅರಿವು ಕಾರ್ಯಕ್ರಮ

ನಂದಿನಿ ಗ್ರಾಹಕರ ಮನೆಗಳಿಗೆ ಭೇಟಿ ಕಾರ್ಯಕ್ರಮದಡಿಯಲ್ಲಿ ಭೇಟಿ ನೀಡಿ ‘ನಂದಿನಿ’ ಬಗ್ಗೆ ಅರಿವು ಮೂಡಿಸಲಾಗಿದೆ. ಹಾಲು ಮತ್ತು ಆರೋಗ್ಯದ ಬಗ್ಗೆ ಅರಿವು ಕಾರ್ಯಕ್ರಮ ನಡೆಸಿ ಶಾಲಾ ಕಾಲೇಜು ಮಕ್ಕಳಿಗೆ ,ಸಂಘ ಸಂಸ್ಥೆಗಳಿಗೆ ಹಾಲು ಹಾಗು ಹಾಲಿನ ಉತ್ಪನ್ನಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ.

ಶಾಲಾ ಕಾಲೇಜು ಮಕ್ಕಳಿಗೆ ಡೇರಿ ಬೇಟಿ ಮಾಡಿಸುವ ಮೂಲಕ ಹಾಲಿನ ಬಗ್ಗೆ ಅರಿವು ಮೂಡಿ¸ಲಾಗುತ್ತಿದೆ.