ಮಾರುಕಟ್ಟೆ
ಮೈಸೂರು ನಗರವು ಒಂದು ಪ್ರಮುಖ ಪ್ರವಾಸೋಧ್ಯಮ ಕೇಂದ್ರವಾಗಿದ್ದು ಪ್ರತಿ ದಿನ ಸಾವಿರಾರು ಪ್ರವಾಸಿಗರು ನಗರಕ್ಕೆ ಬೇಟಿ ನೀಡುತ್ತಿದ್ದು ಹಾಗು ಆಥರ್ಿಕ ಉದಾರೀಕರಣ ಮತ್ತು ಜಾಗತೀಕರಣದಿಂದಾಗಿ ಹಲವಾರು ಬಹು ರಾಷ್ಟ್ರೀಯ ಸಂಸ್ಥೆಗಳು ಡೈರಿ ಉದ್ಯಮೆಯಲ್ಲಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡು ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರಾಟದ ಯೋಜನೆಯನ್ನು ರೂಪಿಸುತ್ತಿದ್ದು ಒಕ್ಕೂಟವೂ ಸಹಾ ಸಂಸ್ಥೆಗೆ ಲಾಭ ತರುವಂತಹ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಒಕ್ಕೂಟದ ಮಾರುಕಟ್ಟೆ ಪ್ರಗತಿಯನ್ನು ನಿರಂತರವಾಗಿ ಕಾಯ್ದುಕೊಂಡು ಬರಲು ಹಾಗು ಗ್ರಾಹಕರಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಪರವಾನಿಗಿದಾರರಲ್ಲಿ ನಂದಿನಿ ಬ್ರಾಂಡ್ ಬಗ್ಗೆ ವಿಶ್ವಾಸ ಮೂಡಿಸಲು ಪೂರಕವಾಗುವಂತೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.
ಒಕ್ಕೂಟವು ಐ.ಎಸ್.ಓ22000-2005 ಪ್ರಮಾಣ ಪತ್ರ ಪಡೆದಿದ್ದು ಈ ಸಮಯದಲ್ಲಿ ಮಾರುಕಟ್ಟೆ ಅಭಿವೃದ್ದಿಗೆ ಪರಿಣಾಮಕಾರಿಯಾಗಿ ಕ್ರಮಕೈಗೊಂಡು ಮಾರುಕಟ್ಟೆ ಜಾಲವನ್ನು ವಿಸ್ತ್ತರಿಸಲಾಗುತ್ತಿದೆ.