Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ದ್ಯೇಯೋದ್ದೇಶಗಳು

  • ಗ್ರಾಮೀಣ ಪ್ರದೇಶದ ಉತ್ಪಾದಕರು ಪೂರೈಸುವ ಹಾಲಿಗೆ ನಿಯಮಿತವಾಗಿ ಯೋಗ್ಯ ದರ ನೀಡಿ ವರ್ಷ ಪೂರ್ತಿ ಮಾರುಕಟ್ಟೆ ಒದಗಿಸುವುದು.
  • ಗ್ರಾಮೀಣ ಪ್ರದೇಶದಿಂದ ಸಂಗ್ರಹಿಸಿದ ಹಾಲನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ, ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬೆಳಿಗ್ಗೆ ಮತ್ತು ಸಂಜೆ ಎರಡೂ ಸರದಿಗಳಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲುಪುವಂತೆ ವ್ಯವಸ್ಥೆ ಮಾಡುವುದು.
  • ತುರ್ತುಕರೆ ಮಾರ್ಗಗಳ ಮೂಲಕ ಉತ್ಪಾದಕರ ರಾಸುಗಳಿಗೆ ಪಶು ವೈದ್ಯಕೀಯ ಸೌಲಭ್ಯ ಒದಗಿಸುವುದು, ಮತ್ತು ಸಂಘಗಳ ಸಿಬ್ಬಂದಿಯ ಮೂಲಕ ರಾಸುಗಳಿಗೆ ಪ್ರಥಮ ಚಿಕೆತ್ಸೆಯ ಸೌಲಭ್ಯ ಒದಗಿಸುವುದು.
  • ರಾಸುಗಳ ತಳಿ ಅಭಿವೃದ್ಧಿಗೊಳಿಸುವುದಕ್ಕಾಗಿ ಕೃತಕ ಗರ್ಭಧಾರಣಾ ಸೌಲಭ್ಯ ಕಲ್ಪಿಸಿಕೊಡುವುದು.
  • ಸಂಘಗಳ ಸದಸ್ಯರು ಹಸಿರು ಮೇವು ಅಭಿವೃದ್ಧಿಪಡಿಸುವುದಕ್ಕಾಗಿ ಮೇವಿನ ಬೀಜಗಳು, ಕಾಂಡಗಳು ಮತ್ತು ಅಗತ್ಯ ತಾಂತ್ರಿಕ ತಿಳುವಳಿಕೆ ನೀಡಲು ಕೃಷಿ ತಜ್ಞರ ನೆರವು ಒದಗಿಸುವುದು ಹಾಗೂ ಅಧಿಕ ಹಾಲಿನ ಉತ್ಪಾದನೆಗಾಗಿ ಸಮತೋಲನ ಪಶು ಆಹಾರವನ್ನು ಉತ್ಪಾದಕರಿಗೆ ಪೂರೈಸುವುದು.
  • ಸಂಘಗಳ ಸಾಂಸ್ಥಿಕ ಬಲವರ್ಧನೆಗಾಗಿ ಸಹಕಾರ ಅಭಿವೃದ್ಧಿ ಕಾರ್ಯಕ್ರಮದಡಿ ಮಹಿಳಾ ಶಿಕ್ಷಣ ಶಿಬಿರ, ಸದಸ್ಯರ ಶಿಕ್ಷಣ ಶಿಬಿರಗಳನ್ನು ಏರ್ಪಡಿಸುವುದು.
  • ಸಂಘಗಳ ಸಿಬ್ಬಂದಿ ಮತ್ತು ಸದಸ್ಯರುಗಳಿಗೆ ತರಬೇತಿ ನೀಡುವುದು.