Error message

Deprecated function: implode(): Passing glue string after array is deprecated. Swap the parameters in drupal_get_feeds() (line 394 of /home1/mymulihn/public_html/kn/includes/common.inc).

ಮೈಮುಲ್ ಪರಿಚಯ

ವಿಶ್ವ ಬ್ಯಾಂಕಿನ ನೆರವಿನೊಡನೆ ಪ್ರಾರಂಭಿಸಲ್ಪಟ್ಟ ಕರ್ನಾಟಕ ಹೈನು ಅಭಿವೃದ್ಧಿ ಯೋಜನೆಯಡಿಯಲ್ಲಿ ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ಐದು ತಾಲ್ಲೂಕುಗಳನ್ನೊಳಗೊಂಡ ಮೈಸೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ದಿ.23.11.1976 ರಂದು ನೊಂದಾಯಿಸಲ್ಪಟ್ಟಿತು.  ಗ್ರಾಮೀಣ ಜನರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಪ್ರಮುಖ ಉಪ ವೃತ್ತಿಯನ್ನಾಗಿ ರೂಪಿಸಿಕೊಳ್ಳುವಂತೆ ಮಾಡಿ ಅವರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಆಯ್ದ ಹಳ್ಳಿಗಳಲ್ಲಿ “ಅಮುಲ್” ಮಾದರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಕಾರ್ಯ ಆರಂಭವಾಯಿತು.  ಘನ ಸರ್ಕಾರದ ಆದೇಶದಂತೆ ಒಕ್ಕೂಟವು ವಿಭಜನೆಗೊಂಡು 1.4.1987ರಿಂದ ಮಂಡ್ಯ ಜಿಲ್ಲೆಯ ಸಂಘಗಳನ್ನು ಬಿಟ್ಟು ಮೈಸೂರು ಜಿಲ್ಲೆಗೆ ಸೀಮಿತವಾದಂತೆ ಕಾರ್ಯ ನಿರ್ವಹಿಸುತ್ತಿದೆ ಹಾಗೂ 01.04.2015 ರಿಂದ ಚಾಮರಾಜನಗರ ಜಿಲ್ಲೆಯ ಸಂಘಗಳನ್ನು ಒಳಗೊಂಡಂತೆ ಪ್ರತ್ಯೇಕ ಒಕ್ಕೂಟಗಳಾಗಿ ಬೇರ್ಪಡಿಸಿ, ಪ್ರಸ್ತುತ ಒಕ್ಕೂಟವು ಮೈಸೂರು ಜಿಲ್ಲೆಗೆ ಸೀಮಿತವಾದಂತೆ 7 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.